ಬಂದ ನೋಡಿ ಗೋವಿಂದ ಕೃಷ್ಣಾ ಬಂದಾ ನೋಡಿ ॥ಪ॥
ಬಂದ ಬಂದ ಆನಂದ ತೀರ್ಥ ಮುನೀಂದ್ರ ವಂದ್ಯ
ಹರಿನಂದ ಮುಕುಂದನು
ಬಂದಾ ರಂಗ ಬಂದಾ ಕೃಷ್ಣ ಬಂದಾ॥ಅ.ಪ॥
ಸರಸಿಜಾಕ್ಷ ಹರಿಯೇ ಸರ್ವರ ಪೊರೆವ ದಯಾನಿಧಿಯೇ
ಕರಿಯ ವರನ ಚಕ್ರದಿ ಉದ್ಧರಿಸಿದ ಹರಿ ನಮ್ಮ ಪಾಲಿಪ ಪಾಲ್ಗೊಡಲೊಡೆಯ ॥೧॥
ಇಂದ್ರ ದೇವ ವಂದ್ಯಾ ಇಷ್ಟರ ಇಂದು ಕಾಯುವ ನಿತ್ಯಾನಂದ
ಚಂದ್ರ ಕೋಟಿ ಲಾವಣ್ಯ ಮುಖದಲಿ ಸುಂದರ ಅರಳೆಲೆ ಹಾರಗಳಿಂದಲಿ॥೨॥
ಚರಣ ಕಮಲವಂತೆ ಸರ್ವದ ಮಾಳ್ಪುದುದಯವಂತೆ
ತರತರ ಜನರಿಗೆ ಕರೆದು ವರವೀವ ಸರಸಿಜಾಕ್ಷ ನಮ್ಮ ಪುರಂದರ ವಿಠಲನು॥೩॥
banda nODi gOvinda krSNa
anupallavi
banda banda Ananda tIrta munIndra vandya hari nanda mukundanu
caraNam 1
sarasijAkSa doreya sarvara poreva dayAnidhiye
kariya varana cakradi uddhirisida hari namma pAlipa pAlgaDaloDeyanu
caraNam 2
indradEva vandya iSTaraindu kAvya nityAnanda
candra kOTi lAvaNya mukhadali sundara araLela hAragaLindeli
caraNam 3
caraNa kamala kAnte sarvadA mALpudu dayavante
taratara janarige karedu varava nIva sarasijAkSa namma purandara viTTalanu
No comments:
Post a Comment